Job Description: 1945ರಲ್ಲಿ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ(FAO) ಯು ಪ್ರತಿವರ್ಷ ಅಕ್ಟೋಬರ್ 16 ತಾರೀಕಿನಂದು "ವಿಶ್ವ ಆಹಾರ ದಿನ"ವನ್ನಾಗಿ ಘೋಷಿಸಿತು. ಈ ಮೂಲಕ ಹಸಿವಿನ ಕುರಿತಾಗಿ ಜಾಗೃತಿ, ಉತ್ತಮ ಆರೋಗ್ಯಕ್ಕಾಗಿ ಆಹಾರದ ಕ್ರಮ ಸೇರಿ ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. * ಈ ದಿನದಂದು ಜಗತ್ತಿನಾದ್ಯಂತ ಹಲವು ಕಾರ್ಯಕ್ರಮಗಳು, ಮ್ಯಾರಾಥಾನ್ಗಳು, ಹಸಿವಿನ ಮೆರವಣಿಗೆ, ವಸ್ತು ಪ್ರದರ್ಶನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿ ವಿವಿಧ ಜಾಗೃತಿ ಸಭೆ ಸಮಾರಂಭ ಆಯೋಜಿಸಲಾಗುತ್ತಿದೆ. * ಈ ವರ್ಷ ಆಹಾರ ಮತ್ತು ಕೃಷಿ ಸಂಸ್ಥೆಯ 75ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ. * ಈ ವರ್ಷದ ದ್ಯೇಯವಾಕ್ಯ : ಬೆಳೆಯಿರಿ, ಪೋಷಿಸಿ, ಸುಸ್ಥಿರವಾಗಿರಿ. ಒಟ್ಟಾಗಿರಿ. ನಮ್ಮ ಕೆಲಸಗಳೇ ನಮ್ಮ ಭವಿಷ್ಯ.("Grow, nourish, sustain. Together. Our actions are our future.")