Job Description: ನವದೆಹಲಿ: ಭಾರತ ಹಾಗೂ ರಷ್ಯಾ ರಾಷ್ಟ್ರಗಳ ಜಂಟಿ ತಂತ್ರಜ್ಞಾನದೊಂದಿಗೆ ತಯಾರಿಸಲಾದ ಬ್ರಹ್ಮೋಸ್ ಸೂಪರ್ಸಾನಿಕ್ ಕ್ಷಿಪಣಿಯ ನೌಕಾ ಆವೃತ್ತಿಯನ್ನು ಇತ್ತೀಚಿಗೆ ಐಎನ್ಎಸ್ ಚೆನ್ನೈನ ಅರಬ್ಬೀ ಸಮುದ್ರದಲ್ಲಿ ಪರೀಕ್ಷೆಗೊಳಪಡಿಸಲಾಯಿತು ಹಾಗೂ ಈ ಪರೀಕ್ಷೆಯಲ್ಲಿ ಬ್ರಹ್ಮೋಸ್ ಯಶಸ್ವಿಯಾಗಿದೆ ಎಂದು ಭಾರತೀಯ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ. * ಈಗ ಪರೀಕ್ಷಿಸಲಾಗಿರುವ ಕ್ಷಿಪಣಿಯನ್ನು ಭಾರತೀಯ ನೌಕಾಪಡೆಯ ನೌಕೆಗಳ ಮೂಲಕ ಉಡಾಯಿಸಬಹುದಾಗಿದೆ. * ಈ ಕ್ಷಿಪಣಿಯ 290 ಕಿ.ಮೀ ವ್ಯಾಪ್ತಿಯ ಸಾಮರ್ಥ್ಯ ಹೊಂದಿದೆ. * ಕ್ಷಿಪಣಿಯು ಭೂ, ವಾಯು ಮತ್ತು ನೌಕಾ ರೂಪಾಂತರಗಳನ್ನು ಹೊಂದಿದೆ. * ಮ್ಯಾಕ್ 2.8 ನ ವೇಗ ಹೊಂದಿದ್ದು, ಶಬ್ದದ ವೇಗಕ್ಕಿಂತಲೂ ಮೂರು ಪಟ್ಟು ಅಧಿಕವಾಗಿದೆ.