Job Description: ಮೈಸೂರು : ನೈಋತ್ಯ ರೈಲ್ವೆಯ ಪ್ರಮುಖ ನಿಲ್ದಾಣಗಳಲ್ಲಿ ಒಂದಾಗಿರುವ ಮೈಸೂರು ರೈಲ್ವೆ ನಿಲ್ದಾಣವನ್ನು 2019-20ನೇ ಸಾಲಿನ 'ಅತ್ಯುತ್ತಮ ನಿರ್ವಹಣೆಯ ನಿಲ್ದಾಣ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಮೂಲಕ ಮೈಸೂರು ನಿಲ್ದಾಣವು ನಾಲ್ಕು ಬಾರಿ ಈ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಇನ್ನು ಮೈಸೂರು ನಿಲ್ದಾಣದಿಂದ ನಿಜಾಮುದ್ದೀನ್ (ದೆಹಲಿ) ನಿಲ್ದಾಣದ ನಡುವೆ ಚಲಿಸುವ ವಾರದ ಸೂಪರ್ ಫಾಸ್ಟ್ ರೈಲಾಗಿರುವ "ಸ್ವರ್ಣಜಯಂತಿ" ರೈಲಿಗೆ 2019-20ನೇ ಸಾಲಿನ ನೈಋತ್ಯ ರೈಲ್ವೆಯಲ್ಲಿ 'ಅತ್ಯುತ್ತಮವಾಗಿ ನಿರ್ವಹಿಸಿದ ರೇಕ್' ಎಂಬ ಪ್ರಶಸ್ತಿಯನ್ನು ಘೋಷಿಸಲಾಗಿದೆ.