Job Description: ಶ್ರೀನಗರ: ಇತ್ತೀಚಿಗಷ್ಟೇ ಪ್ರಧಾನಿ ಮೋದಿಯವರು ಅಟಲ್ ಸುರಂಗವನ್ನು ಉದ್ಘಾಟಿಸಿದ ಬೆನ್ನಲ್ಲೇ, ಇದೀಗ ಶ್ರೀನಗರದಿಂದ ಲೇಹ ವರೆಗೆ ಸರ್ವಋತುಗಲ್ಲಿ ಸಂಚರಿಸಬಹುದಾದ ಸುರಂಗ ನಿರ್ಮಾಣಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಚಾಲನೆ ನೀಡಿದರು. * ಒಟ್ಟು 14.15 ಕಿ.ಮೀ ಉದ್ದದ ಸುರಂಗ ಮಾರ್ಗ ಇದಾಗಲಿದ್ದು, ಇದು ಏಷ್ಯಾದ ಅತ್ಯಂತ ಉದ್ದದ ಸುರಂಗಗಳಲ್ಲಿ ಒಂದೆನಿಸಲಿದೆ. * ಸುರಂಗ ನಿರ್ಮಾಣ ಆಧುನಿಕ ಭಾರತದ ಇತಿಹಾಸದಲ್ಲಿ ದೊಡ್ಡ ಸಾಧನೆಯಾಗಲಿದ್ದು, ಮಿಲಿಟರಿ ಚಟುವಟಿಕೆಗಳ ಮೂಲಕ ದೇಶದ ರಕ್ಷಣೆಗೂ ಸಹಕರಿಸಲಿದೆ. * ಸುರಂಗ ಮಾರ್ಗ ಪೂರ್ಣಗೊಂಡ ಬಳಿಕ ಮೂರು ಗಂಟೆಯ ಸಂಚಾರದ ಅವಧಿ ಕೇವಲ 15 ನಿಮಿಷಕ್ಕೆ ಇಳಿಯಲಿದೆ. * ಒಟ್ಟು 6,800 ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದ್ದು, ಪ್ರಧಾನಿ ಮೋದಿ 2018 ಮೇನಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು.