Job Description: ವಿಶ್ವ ಸಂಸ್ಥೆಯ ಭಾಗವಾಗಿರುವ ವಿಶ್ವ ಆಹಾರ ಯೋಜನೆಯು ಹಸಿವು ನೀಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಾಗೂ ಯೋಜನೆಗಳನ್ನು ಪರಿಗಣಿಸಿ, 2020ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರ ನೀಡಲು ನಾರ್ವೆಯ ನೊಬೆಲ್ ಸಮಿತಿ ತೀರ್ಮಾನಿಸಿದೆ. * ಈ ಬಾರಿ ನೊಬೆಲ್ ಶಾಂತಿ ಪ್ರಶಸ್ತಿ ಒಟ್ಟು 211 ವ್ಯಕ್ತಿಗಳು ಹಾಗೂ 107 ಸಂಸ್ಥೆಗಳನ್ನು ನಾಮನಿರ್ದೇಶನ ಮಾಡಲಾಗಿತ್ತು, ಇವುಗಳ ಪೈಕಿ ವಿಶ್ವ ಆಹಾರ ಯೋಜನೆಗೆ ಪ್ರಶಸ್ತಿ ಭಾಗ್ಯ ದೊರೆತಿದೆ. * ನೊಬೆಲ್ ಶಾಂತಿ ಪುರಸ್ಕಾರವು 10 ಮಿಲಿಯನ್ ಕ್ರೋನಾ (ಅಂದಾಜು ₹8 ಕೋಟಿ) ನಗದು ಬಹುಮಾನ ಹಾಗೂ ಚಿನ್ನದ ಪದಕವನ್ನು ಒಳಗೊಂಡಿದೆ. ಇನ್ನು ಈ ಪ್ರಶಸ್ತಿ ಸಮಾರಂಭವು ಡಿಸೆಂಬರ್ 10ರಂದು ನಾರ್ವೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ.