Job Description: ಮಡಿಕೇರಿ : ನಾಗರಿಕ ವಿಮಾನ ಯಾನದ ಭದ್ರತಾ ವಿಭಾಗ (BCAS)ನ ಮಹಾ ನಿರ್ದೇಶಕರನ್ನಾಗಿ ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯ ಮೂಲದ ಹಿರಿಯ ಐಪಿಎಸ್ ಅಧಿಕಾರಿ ಮನೆಯಪಂಡ ಎ. ಗಣಪತಿ ಅವರನ್ನು ನೇಮಕ ಮಾಡಲಾಗಿದೆ. ಇವರು 1986ನೇ ಸಾಲಿನ ಉತ್ತರಾಖಂಡ ಕೇಡರ್ನ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದು, 2024ರ ಫೆಬ್ರವರಿಯಲ್ಲಿ ಸೇವಾ ನಿವೃತ್ತರಾಗಲಿದ್ದು, ಅಲ್ಲಿಯವರೆಗೆ ಬಿಸಿಎಎಸ್ ಮಹಾ ನಿರ್ದೇಶಕರಾಗಿ ತಮ್ಮ ಸೇವೆ ಸಲ್ಲಿಸಲಿದ್ದಾರೆ. ಈ ಮೊದಲು ಬಿಸಿಎಎಸ್ ಮುಖ್ಯಸ್ಥರ ಹುದ್ದೆಯಲ್ಲಿದ್ದ ರಾಕೇಶ್ ಅಸ್ತಾನರವರನ್ನು ಗಡಿ ಭದ್ರತಾ ಪಡೆಯ ಮಹಾ ನಿರ್ದೇಶಕರನ್ನಾಗಿ ನೇಮಕ ಮಾಡಿದ ಹಿನ್ನಲೆ ತೆರವಾಗಿದ್ದ ಈ ಸ್ಥಾನಕ್ಕೆ ಗಣಪತಿಯವರನ್ನು ನೇಮಿಸಲಾಗಿದೆ. * 2016ರಲ್ಲಿ ಉತ್ತರಾಖಂಡ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.