Job Description: ನವದೆಹಲಿ: ಕೇಂದ್ರ ಸಚಿವ, ಲೋಕ್ ಜನಶಕ್ತಿ ಪಾರ್ಟಿ(ಎಲ್ಜೆಪಿ) ಸಂಸ್ಥಾಪಕ, ದಲಿತ ನಾಯಕ ರಾಮ್ ವಿಲಾಸ್ ಪಾಸ್ವಾನ್ ಅವರು ತಮ್ಮ 74 ವರ್ಷ ವಯಸ್ಸಿನಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲಿ ನಿಧನರಾಗಿದ್ದಾರೆ ಎಂದು ಸಚಿವರ ಪುತ್ರ ಚಿರಾಗ್ ಮಾಹಿತಿ ನೀಡಿದ್ದಾರೆ. * ಸತತ 5 ದಶಕಗಳಿಂದ ರಾಜಕೀಯದಲ್ಲಿ ಸಕ್ರೀಯರಾಗಿದ್ದ ಇವರು ಎನ್ ಡಿಎ ಮೈತ್ರಿಕೂಟದ ಎಲ್ ಜೆಪಿ ಪಕ್ಷದಿಂದ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು. * ಸಂಯುಕ್ತ ಸೋಷಿಯಲಿಸ್ಟ್ ಪಕ್ಷದ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ ಇವರು 1969ರಲ್ಲಿ ಬಿಹಾರ ವಿಧಾನಸಭೆಗೆ ಶಾಸಕರಾಗಿ ಮೊದಲ ಬಾರಿ ಆಯ್ಕೆಯಾದರು. * 1977, 1980, 1989, 1996, 1999, 2004 ಮತ್ತು 2014 ರಲ್ಲಿ ಒಟ್ಟು ಎಂಟು ಬಾರಿ ಅವರು ಲೋಕಸಭೆಗೆ ಚುನಾಯಿತರಾಗಿದ್ದರು.