Job Description: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಸತತ 13ನೇ ವರ್ಷ ಭಾರತದ ಅತ್ಯಂತ ಶ್ರೀಮಂತ ಭಾರತೀಯ ಆಗಿದ್ದಾರೆ. ದಿನಾಂಕ 08 ಅಕ್ಟೋಬರ್ 2020 ರಂದು ಫೋರ್ಬ್ಸ್ 2020ನೇ ಸಾಲಿನ ಟಾಪ್ 100ರ ಪಟ್ಟಿ ಪ್ರಕಟಗೊಂಡಿದ್ದು, ಈ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿಯವರು ಅಗ್ರಸ್ಥಾನದಲ್ಲಿದ್ದಾರೆ. ಅಲ್ಲದೆ ಸತತ 13 ವರ್ಷಗಳಿಂದ ಅವರು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದವರೆಲ್ಲರ ಒಟ್ಟಾರೆ ನಿವ್ವಳ ಆಸ್ತಿ ಮೌಲ್ಯ ಕಳೆದ ಬಾರಿಗಿಂತ 14% ಹೆಚ್ಚಳವಾಗಿದ್ದು, $ 517.5 ಬಿಲಿಯನ್ ನಷ್ಟಿದೆ ಎಂದು ಫೋರ್ಬ್ಸ್ ವರದಿ ಮಾಡಿದೆ. ಭಾರತದ ಟಾಪ್ ಶ್ರೀಮಂತರ ಪಟ್ಟಿ : 1. ಮುಕೇಶ್ ಅಂಬಾನಿ (88.7 ಬಿಲಿಯನ್ ಡಾಲರ್) 2. ಗೌತಮ್ ಅದಾನಿ (25.2 ಬಿಲಿಯನ್ ಡಾಲರ್) 3. ಶಿವ್ ನಾಡಾರ್ (20.4 ಬಿಲಿಯನ್ ಡಾಲರ್) 4. ರಾಧಾಕಿಶನ್ ದಮಾನಿ (15.4 ಬಿಲಿಯನ್ ಡಾಲರ್) 5. ಹಿಂದೂಜಾ ಸೋದರರು (12.8 ಬಿಲಿಯನ್ ಡಾಲರ್)