Job Description: ಟಾಕ್ ಹೋಂ : ಅಮೆರಿಕಾದ ಮಹಿಳಾ ಕವಯತ್ರಿ ಲೂಯಿಸ್ ಗ್ಲುಕ್ಸ್ ಅವರು 2020 ನೇ ಸಾಲಿನ ಪ್ರತಿಷ್ಠಿತ ಸಾಹಿತ್ಯ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿರುವುದಾಗಿ ಸ್ಟಾಕ್ ಹೋಂನ ಸ್ವೀಡಿಷ್ ಅಕಾಡೆಮಿಯಲ್ಲಿ ಅಕ್ಟೋಬರ್ 08 ರಂದು ಅಧಿಕೃತ ಘೋಷಣೆ ಮಾಡಲಾಗಿದೆ. ಏಪ್ರಿಲ್ 22, 1943 ರಂದು ನ್ಯೂಯಾರ್ಕ್ ನಗರದಲ್ಲಿ ಜನಿಸಿದ ಇವರು, ಲೇಖಕಿಯಾಗಿ ಅವರ ವೃತ್ತಿಜೀವನದ ಜೊತೆಗೆ, ಹಲವು ಸಂಸ್ಥೆಗಳಲ್ಲಿ ಶಿಕ್ಷಕರಾಗಿ ಜೀವನ ನಡೆಸಿದ್ದಾರೆ. ಇವರು ಇದುವರೆಗೆ ಒಟ್ಟು ಹನ್ನೆರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದು ಕವನ ಹಾಗೂ ಕಾವ್ಯ ಕುರಿತಂತೆ ಅನೇಕ ಪ್ರಬಂಧಗಳನ್ನು ರಚಿಸಿದ್ದಾರೆ.