Job Description: ಭಾರತೀಯ ವಾಯುಪಡೆ 1932ರ ಅಕ್ಟೋಬರ್ 8 ರಂದು ಪ್ರಾರಂಭವಾಗಿದ್ದು, ಈ ದಿನದ ಸವಿನೆನಪಿಗಾಗಿ ಪ್ರತಿ ವರ್ಷ ಅಕ್ಟೋಬರ್ 08 ರಂದು ಭಾರತೀಯ ವಾಯುಸೇನಾ ಸಂಸ್ಥಾಪನಾ ದಿನವನ್ನು ಆಚರಿಸುತ್ತ ಬರಲಾಗಿತ್ತಿದೆ. ಅದೇ ರೀತಿ ಈ ವರ್ಷ 88ನೇ ಭಾರತೀಯ ವಾಯುಸೇನಾ ಸಂಸ್ಥಾಪನಾ ದಿನವನ್ನು ಗಾಜಿಯಾಬಾದ್ ಹಾಗೂ ಹಿಂಡನ್ ವಾಯುನೆಲೆಯಲ್ಲಿ ವಾಯುಪಡೆ ಪರೇಡ್, ವೈಮಾನಿಕ ಪ್ರದರ್ಶನ ಮೂಲಕ ಆಯೋಜಿಸಲಾಗಿತ್ತು. ಈ ವಿಶೇಷ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಶುಭ ಕೋರಿದರು.