Job Description: ನವದೆಹಲಿ: ಹಿರಿಯ ಬ್ಯಾಂಕರ್ ದಿನೇಶ್ ಕುಮಾರ್ ಖರಾ ಅವರನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI)ನ ನೂತನ ಅಧ್ಯಕ್ಷರನ್ನಾಗಿ ನೇಮಿಸಿ ಸರ್ಕಾರ ಆದೇಶಿಸಿದೆ. ಇಲ್ಲಿಯವರೆಗೆ ಈ ಹುದ್ದೆಯನ್ನು, ರಜನೀಶ್ ಕುಮಾರ್ ನಿರ್ವಹಿಸುತ್ತಿದ್ದು, ಅವರ ಮೂರು ವರ್ಷಗಳ ಸೇವೆ ಪೂರ್ಣಗೊಂಡ ಹಿನ್ನೆಲೆ ಸರ್ಕಾರ ನೂತನ ಅಧ್ಯಕ್ಷರಾಗಿ ದಿನೇಶ್ ಕುಮಾರ್ ಖರಾ ಅವರನ್ನು ನೇಮಿಸಿದೆ. ಇನ್ನು ದಿನೇಶ್ ಕುಮಾರ್ ಖರಾ ಅವರು ಮುಂದಿನ ಮೂರೂ ವರ್ಷಗಳವರೆಗೆ ಈ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ.