Job Description: ನವದೆಹಲಿ: ಇದೆ ಮೊದಲ ಬಾರಿಗೆ ಬಿಹಾರ ವಿಧಾನಸಭಾ ಚುನಾವಣೆಗೆ ಅಧಿಕಾರಿಯಾಗಿ ಲಿಂಗ ಬದಲಾವಣೆಗೊಂಡ ಮಹಿಳೆಯೊಬ್ಬರನ್ನು ನೇಮಕ ಮಾಡಲಾಗಿದೆ. * ಇದೆ ಅಕ್ಟೋಬರ್ 28 ರಂದು ನಡೆಯಲಿರುವ ಬಿಹಾರ ಚುನಾವಣಾ ಅಧಿಕಾರಿಯಾಗಿ ಮೋನಿಕಾ ದಾಸ್ ನೇಮಕಗೊಂಡದ್ದಾರೆ. ಇವರು ಪಾಟ್ನಾ ವಿವಿಯಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಯಾಗಿದ್ದು, 2015 ರಿಂದ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಕೆಲಸ ಮಾಡಿದ ಮೊದಲ ತೃತೀಯ ಲಿಂಗಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ದೇಶದ ಯಾವುದೇ ರಾಜ್ಯದಲ್ಲಿಯೂ ಇದುವರೆಗೆ ತೃತೀಯಲಿಂಗಿಯನ್ನು ಚುನಾವಣೆಯಲ್ಲಿ ಕರ್ತವ್ಯಕ್ಕೆ ನೇಮಿಸಿಲ್ಲ, ಆದರೆ ಬಿಹಾರ ಮೊದಲ ಬಾರಿಗೆ ಈ ರೀತಿ ತೃತೀಯ ಲಿಂಗಿ ಅಧಿಕಾರಿಯೊಬ್ಬರನ್ನು ನೇಮಿಸುವ ಮೂಲಕ ಐತಿಹಾಸಿಕ ದಾಖಲೆ ಹೊಂದಿದೆ.