Job Description: ದೆಹಲಿ: ಭಾರತ ಸರ್ಕಾರವು ನೆರೆಯ ದ್ವೀಪ ರಾಷ್ಟ್ರ ಮಾಲ್ಡೀವ್ಸ್ಗೆ ಡಾರ್ನಿಯರ್ ವಿಮಾನಗಳನ್ನು ಕೊಡುಗೆಯಾಗಿ ನೀಡಿರುವುದಾಗಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಈ ವಿಮಾನಗಳ ಪೂರೈಕೆಯಿಂದಾಗಿ ದ್ವೀಪರಾಷ್ಟ್ರಕ್ಕೆ ತನ್ನ ವಿಶೇಷ ಆರ್ಥಿಕ ವಲಯದ ಮೇಲೆ ನಿಗಾ ಇಡಲು ಮತ್ತು ಸಾಗರ ಭಯೋತ್ಪಾದನಾ ಚಟುವಟಿಕೆಗಳ ಮೇಲೆ ಗಮನಹರಿಸಲು ಈ ವಿಮಾನಗಳನ್ನು ಪೂರೈಕೆ ನೆರವಾಗಲಿದೆ ಎಂದು ಸರ್ಕಾರ ಹೇಳಿದೆ. * 2016ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ, ಅಂದಿನ ಮಾಲ್ಡೀವ್ಸ್ನ ಅಧ್ಯಕ್ಷರಾದ ಅಬ್ದುಲ್ಲಾ ಯಮೀನ್ ಅವರ ಕೋರಿಕೆಯಂತೆ ಡಾರ್ನಿಯರ್ ವಿಮಾನಗಳನ್ನು ಪೂರೈಸಲಾಗಿದ್ದು, ವಿಮಾನದ ನಿರ್ವಹಣೆಗಾಗಿ ಪೈಲಟ್ಗಳು, ವೀಕ್ಷಕರು ಮತ್ತು ಎಂಜಿನಿಯರ್ಗಳ ಮಾಲ್ಡೀವ್ಸ್ನ ಏಳು ಮಿಲಿಟರಿ ಸಿಬ್ಬಂದಿಗೆ ಭಾರತೀಯ ನೌಕಾಪಡೆ ಈಗಾಗಲೇ ತರಬೇತಿ ನೀಡಿದೆ.