Job Description: ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ರಾಜ್ಯಾದಂತ ಶೀಘ್ರದಲ್ಲೇ "ಇ-ಲಾಸ್ಟ್ ರಿಪೋರ್ಟ್" ಎಂಬ ವಿನೂತನ ಮೊಬೈಲ್ ಆಯಪ್ ಅನ್ನು ಬಿಡುಗಡೆಗೊಳಿಸಿದೆ. ಈ ಕುರಿತು ಕರ್ನಾಟಕದ ಮಹಾನಿರ್ದೇಶಕ ಮತ್ತು ಇನ್ಸ್ಪೆಕ್ಟರ್ ಜನರಲ್ ಪ್ರವೀಣ್ ಸೂದ್ ಮಾಹಿತಿ ನೀಡಿದ್ದಾರೆ. ಇ-ಲಾಸ್ಟ್ ರಿಪೋರ್ಟ್ ಎಂಬ ಆಯಪ್ ಮೂಲಕ ಸಾರ್ವಜನಿಕರಕು ದಾಖಲೆಗಳು, ಮೊಬೈಲ್ ಫೋನ್, ಪರ್ಸ್ ಸೇರಿ ಯಾವುದೇ ವಸ್ತುವನ್ನು ಕಳೆದುಕೊಂಡರು ಇಲ್ಲಿ ವರದಿ ಮಾಡಲು ಅವಕಾಶ ನೀಡಲಾಗುತ್ತದೆ. ಇದರಿಂದ ಜನರು ಪೊಲೀಸ್ ಠಾಣೆಗೆ ಭೇಟಿ ನೀಡುವ ಅಗತ್ಯವಿರುವದಿಲ್ಲ. * ಇದು ಆಂಡ್ರಾಯ್ಡ್ ಮತ್ತು ಐಓಎಸ್ ಎರಡೂ ಆಪರೇಟಿಂಗ್ ಸಿಸ್ಟಮ್'ಗಳಿಗೂ ಬಳಸಲು ಅವಕಾಶವಿದೆ.