Job Description: ನವದೆಹಲಿ: ಪ್ರಾದೇಶಿಕ ಭಾಷೆಗಳಿಗೆ 'ಅಧಿಕೃತ ಭಾಷೆ'ಯ ಸ್ಥಾನಮಾನ ನೀಡುವ ಪ್ರಸ್ತಾವ ತನ್ನ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಪ್ರಸ್ತುತ ಹಿಂದಿ ಮತ್ತು ಇಂಗ್ಲಿಷ್ ಸರ್ಕಾರದ ಅಧಿಕೃತ ಭಾಷೆಗಳಾಗಿದ್ದು, ಆ ಪಟ್ಟಿಗೆ ಯಾವುದೇ ಪ್ರಾದೇಶಿಕ ಭಾಷೆಗಳನ್ನು ಸೇರಿಸುವ ಯೋಜನೆಯು ಇಲ್ಲ, ಹಾಗೂ 'ಅಧಿಕೃತ ಭಾಷಾ ಕಾಯ್ದೆ'ಗೆ ತಿದ್ದುಪಡಿ ಮಾಡಬಹುದಾದ ಯಾವುದೇ ಪ್ರಸ್ತಾವವೂ ಸರ್ಕಾರದ ಮುಂದಿಲ್ಲ ಎಂದು ಈ ಕುರಿತು ಪ್ರಶ್ನಿಸಿದ್ದ ತಮಿಳುನಾಡಿನ ಎಂಡಿಎಂಕೆ ಸಂಸದ ವೈಕೊ ಅವರ ಪ್ರಶ್ನೆಗೆ ಇತ್ತೀಚಿಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ.