Job Description: ನವದೆಹಲಿ: ಇತ್ತೀಚಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಪರೆನ್ಸ್ ಸಭೆಯ ಮೂಲಕ ಐತಿಹಾಸಿಕ ಕೋಸಿ ನದಿ ರೈಲು ಮಹಾ ಸೇತುವೆಯನ್ನು ಉದ್ಘಾಟಿಸಿದರು. ಇದೆ ಸಂದರ್ಭದಲ್ಲಿ ಬಿಹಾರದ 12 ರೈಲು ಯೋಜನೆಗಳನ್ನು ಉದ್ಘಾಟಿಸಿದರು. ಈ ಯೋಜನೆಗೆ 2003-04ರಲ್ಲಿ ಕೇಂದ್ರ ಸರ್ಕಾರದಿಂದ ಮಂಜೂರಾತಿ ನೀಡಲಾಗಿತ್ತು, ಸೇತುವೆಯು ಒಟ್ಟು 1.9 ಕಿಲೋ ಮೀಟರ್ ಉದ್ದ ಹೊಂದಿದ್ದು, ಯೋಜನೆಗಾಗಿ 516 ಕೋಟಿ ರೂ ಅನುದಾನ ಬಳಕೆ ಮಾಡಲಾಗಿದೆ.