Job Description: ನವದೆಹಲಿ : ಅಭಿವೃದ್ಧಿ ವ್ಯವಸ್ಥಾಪನಾ ಸಂಸ್ಥೆ (ಐಎಂಡಿ) ಮತ್ತು ಸಿಂಗಪುರ ತಂತ್ರಜ್ಞಾನ ಮತ್ತು ವಿನ್ಯಾಸ ವಿಶ್ವವಿದ್ಯಾಲಯವು (ಎಸ್ಯುಟಿಡಿ) 2020ರ 'ಜಾಗತಿಕ ಸ್ಮಾರ್ಟ್ ಸಿಟಿ ಸೂಚ್ಯಂಕ' (Smart City Index) ವನ್ನು ಪ್ರಕಟಿಸಿದ್ದು, ಈ ಸೂಚ್ಯಂಕದಲ್ಲಿ ಭಾರತದ ನಗರಗಳಾದ ನವದೆಹಲಿ, ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರು ಕಳೆದ ಬಾರಿಗಿಂತ ತೀವ್ರ ಕುಸಿತ ಕಂಡಿವೆ. ಸಿಂಗಪುರ ಮೊದಲ ಸ್ಥಾನ ಪಡೆದಿದೆ. 'ಜಾಗತಿಕ ಸ್ಮಾರ್ಟ್ ಸಿಟಿ ಸೂಚ್ಯಂಕ' ಪ್ರಕಾರ ಭಾರತದ ನಗರಗಳ ಪೈಕಿ ಕ್ರಮವಾಗಿ ಹೈದರಾಬಾದ್ (85), ನವದೆಹಲಿ (86), ಮುಂಬೈ (93), ಬೆಂಗಳೂರು (95) ಮೊದಲ ನಾಲ್ಕು ಸ್ಥಾನ ಪಡೆದಿವೆ. ಇನ್ನು ಸೂಚ್ಯಂಕದಲ್ಲಿ ಸಿಂಗಪುರ, ಹೆಲ್ಸಿಂಕಿ, ಆಕ್ಲೆಂಡ್, ಓಸ್ಲೊ, ಕೊಪನ್ಹೇಗನ್, ಜಿನೇವಾ, ತೈಪೆ, ಆಯಮ್ಸ್ಟರ್ಡ್ಯಾಂ ಮತ್ತು ನ್ಯೂಯಾರ್ಕ್ ನಗರಗಳು ಕ್ರಮವಾಗಿ ಮೊದಲ ಹತ್ತು ಸ್ಥಾನಗಳಲ್ಲಿವೆ. * ಒಟ್ಟು 109 ನಗರಗಳು ಸೂಚ್ಯಂಕದಲ್ಲಿ ಸ್ಥಾನ ಪಡೆದಿದ್ದು, ಪ್ರತಿ ನಗರದ 120 ಪ್ರದೇಶಗಳ ನಿವಾಸಿಗಳ ಜೀವನಮಟ್ಟ ಆಧಾರಿಸಿ ಸೂಚ್ಯಂಕ ಪ್ರಕಟಿಸಲಾಗಿದೆ.