Job Description: ಬೆಂಗಳೂರು: ಕನ್ನಡ ಚಿತ್ರರಂಗದ ದಂತಕತೆಯೆನಿಸಿರುವ ಹಿರಿಯ ಚಿತ್ರ ನಟ ಡಾ| ವಿಷ್ಣುವರ್ಧನ್ ಅವರ 70ನೇ ವರ್ಷದ ಜನ್ಮದಿನಾಚರಣೆ ಇದೆ ಸೆಪ್ಟೆಂಬರ್ 18 ರಂದು ಆಚರಿಸಲಾಗುತ್ತಿದ್ದು, ಈ ದಿನದ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆಯು “ವಿಶೇಷ ಅಂಚೆ ಲಕೋಟೆ"ಯನ್ನು ಬಿಡುಗಡೆಗೊಲಿಸಲಿದೆ. ನಟ ವಿಷ್ಣುವರ್ಧನ್ ಅವರು ಕನ್ನಡ ಚಿತ್ರೋದ್ಯಮಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ ಹಾಗೂ ಭಾರತೀಯ ಚಿತ್ರರಂಗ 100 ವರ್ಷ ಪೂರೈಸಿದ ಅಂಗವಾಗಿ ಭಾರತೀಯ ಅಂಚೆ ಇಲಾಖೆ 2013ರಲ್ಲಿ ವಿಷ್ಣುವರ್ಧನ್ ಅವರ “ವಿಶೇಷ ಅಂಚೆ ಚೀಟಿ’ಯನ್ನು ಬಿಡುಗಡೆಗೊಳಿಸಿಟ್ಟು, ಇದೀಗ ಮತ್ತೆಅವರ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸುತ್ತಿದೆ