Job Description: ನವದೆಹಲಿ: ಬಾಲಿವುಡ್ ನ ಖ್ಯಾತ ನಟ ಪರೇಶ್ ರಾವಲ್ ಅವರನ್ನು ಭಾರತದ ಪ್ರಧಾನ ರಂಗಭೂಮಿ ಸಂಸ್ಥೆಯಾದ ರಾಷ್ಟ್ರೀಯ ನಾಟಕ ಶಾಲೆ(ಎನ್ಎಸ್ಡಿ) ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ನೇಮಿಸಿದೆ. ರಾಷ್ಟ್ರಪತಿ ಭವನವು ಪರೇಶ್ ರಾವಲ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದು, ಇನ್ನು ಮೇಲೆ ರಾಷ್ಟ್ರೀಯ ನಾಟಕ ಶಾಲೆ ವಿದ್ಯಾರ್ಥಿಗಳು ಹಾಗೂ ಕಲಾವಿದರು ಇವರ ಅನುಭವದ ಲಾಭ ಪಡೆಯಲಿದ್ದಾರೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಪಟೇಲ್ ಅಭಿನಂದಿಸಿದ್ದಾರೆ. 65 ವರ್ಷದ ಪರೇಶ್ ರಾವಲ್ 'ಹೇರಾ ಫೇರಿ', 'ಅತಿಥಿ ತುಮ್ ಕಬ್ ಜಾವೋಗೆ', 'ಓ ಮೈ ಗಾಡ್' ಮುಂತಾದ ಚಿತ್ರಗಳಲ್ಲಿ ನಟಿಸಿದ್ದು, ರಂಗಭೂಮಿಯ ಅನುಭವವನ್ನು ಹೊಂದಿದ್ದಾರೆ.