Job Description: ನವದೆಹಲಿ : ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆ (ಎಸ್ಸಿಒ)ಯ ಸಭೆಯ ಸಂದರ್ಭದಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮತ್ತು ಚೀನಾದ ವಿದೇಶಾಂಗ ಮಂತ್ರಿ ವಾಂಗ್ ಯೀ ನಡುವೆ ಮಾತುಕತೆ ನಡೆದಿದ್ದು, ಪೂರ್ವ ಲಡಾಖ್ನ ಭಾರತ-ಚೀನಾ ಗಡಿಯಲ್ಲಿ ಉಭಯ ರಾಷ್ಟ್ರಗಳ ಮಧ್ಯ ಕಳೆದ ನಾಲ್ಕು ತಿಂಗಳುಗಳಿಂದ ತಲೆದೋರಿರುವ ಗಡಿ ಬಿಕ್ಕಟ್ಟು ಮತ್ತು ಯುದ್ಧದ ವಾತಾವರಣವನ್ನು ಶಮನಗೊಳಿಸಲು ಮಾತುಕತೆ ನಡೆಸಿದ್ದು, ಐದು ಅಂಶಗಳ ನೀಲನಕ್ಷೆ ಸಮ್ಮತಿ ನೀಡಲಾಗಿದೆ ಎಂದು ತಿಳಿದುಬಂದಿದೆ. ಉಭಯ ರಾಷ್ಟ್ರಗಳ ಸೇನಾಪಡೆಗಳು ವಾಸ್ತವ ನಿಯಂತ್ರಣರೇಖೆಯಿಂದ (ಎಲ್ಎಸಿ) ತಕ್ಷಣ ಹಿಂದಕ್ಕೆ ಸರಿಯುವುದು ಸೇರಿ ಐದು ಸಂಧಾನ ಸೂತ್ರಗಳ ಬಗ್ಗೆ ಉಭಯ ನಾಯಕರು ಚರ್ಚಿಸಿ ಸಹಮತ ನೀಡಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.