Job Description: ನವದೆಹಲಿ : ಮರಾಠರಿಗೆ ಮೀಸಲಾತಿ ನೀಡುವ ಮಹಾರಾಷ್ಟ್ರದ ಕಾನೂನು ಪ್ರಶ್ನಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಉನ್ನತ ಪೀಠಕ್ಕೆ ವರ್ಗಾಯಿಸಿದೆ ಹಾಗೂ ಈ ವರ್ಷ ಮಹಾರಾಷ್ಟ್ರದಲ್ಲಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮರಾಠ ಮೀಸಲಾತಿ ಇಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. 2020-21 ನೇ ಸಾಲಿನಲ್ಲಿ ಯಾವುದೇ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮರಾಠಿ ಮೀಸಲಾತಿ ಲಭ್ಯವಿರುವದಿಲ್ಲ, ಈ ನಿಯಮ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳ ದಾಖಲಾತಿಯಲ್ಲೂ ಅನ್ವಯಿಸಲಿದ್ದು, ಈ ವಿಷಯದ ಕುರಿತು ಉನ್ನತ ಪೀಠ ನೀಡುವ ತೀರ್ಪಿನ ಬಳಿಕವಷ್ಟೇ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಕುರಿತು ನಿರ್ಣಯ ಕೈಗೊಳ್ಳುವದಾಗಿ ಸುಪ್ರೀಂ ತಿಳಿಸಿದೆ.