Job Description: ನವದೆಹಲಿ: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಸಂಸ್ಥೆಯು ದೇಶೀಯವಾಗಿ ನಿರ್ಮಿಸಿದ Light Utility Helicopter (ಮಿತ ಉಪಯೋಗಕಾರಿ ಕಾಪ್ಟರ್) ಪರೀಕ್ಷಾತ್ರ ಹಾರಾಟ ನಡೆಸಿದ್ದು, ಪ್ರಾಥಮಿಕ ಹಂತದ ಈ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ. ಭೂ ಸೇನೆ ಹಾಗೂ ವಾಯುಪಡೆಗಾಗಿ ಈ ಕಾಪ್ಟರ್ ತಯಾರಿಸಲಾಗಿದ್ದು, ಒಟ್ಟು 10 ದಿನಗಳ ಕಾಲ ಪರೀಕ್ಷೆಗೆ ಒಳಪಡಿಸಲಾಗಿತ್ತು, ಪರೀಕ್ಷೆ ನಂತರ ಹೆಲಿಕಾಪ್ಟರ್ಗೆ ಇರಬೇಕಾದ ಉಷ್ಣ ಹಾಗೂ ತೀವ್ರ ಮಾರುತಗಳ ಹವಾಮಾನ ಪರಿಸ್ಥಿತಿಗಳಲ್ಲಿ ಹಾರಾಟ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದು, ಪರೀಕ್ಷೆಯ ವೇಳೆ ನಿಖರ ಫಲಿತಾಂಶ ನೀಡಿರುವದಾಗಿ ಮೂಲಗಳು ತಿಳಿಸಿವೆ. LUH ನ ವಿಶೇಷಗಳು : - 3000 Kg ಹೆಲಿಕಾಪ್ಟರ್ನ ತೂಕ - 235 kmph ಹೆಲಿಕಾಪ್ಟರ್ನ ಸರಾಸರಿ ವೇಗ - 260 kmph ಕಾಪ್ಟರ್ನ ಗರಿಷ್ಠ ವೇಗ - 350 KM: ಒಂದು ಬಾರಿ ಕಾಪ್ಟರ್ ಸಾಗುವ ಗರಿಷ್ಠ ದೂರ - 3120 KG ಹಾರಾಟದ ವೇಳೆ ಹೆಲಿಕಾಪ್ಟರ್ ಹೊರಬಲ್ಲ ಗರಿಷ್ಠ ತೂಕ