Job Description: ನವದೆಹಲಿ : ಮಾಸ್ಕೋದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಸ್ಥೆಯ ವಿದೇಶಾಂಗ ಸಚಿವರ ಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ವಿದೇಶಾಂಗ ಸಚಿವ ಡಾ.ಸುಬ್ರಹ್ಮಣ್ಯಂ ಜೈಶಂಕರ್ ಭಾಗವಹಿಸಿದರು. ಶಾಂಘೈ ಸಹಕಾರ ಸಂಸ್ಥೆಯ ಪೂರ್ಣ ಸದಸ್ಯರಾಗಿ ಭಾರತ ಭಾಗವಹಿಸುತ್ತಿರುವ 3ನೇ ಸಭೆ ಇದಾಗಿದೆ. * ಭಾರತ ಹಾಗೂಚೀನಾ ರಾಷ್ಟ್ರಗಳ ಮಧ್ಯ ಗಡಿ ಬಿಕ್ಕಟ್ಟು ನಡೆದಿರುವ ಈ ಸಮಯದಲ್ಲೇ ಈ ಸಭೆ ನಡೆಯುತ್ತಿದೆ. * ಈ ಮೊದಲು 2018 ರಲ್ಲಿ ಬೀಜಿಂಗ್ನಲ್ಲಿ ಮತ್ತು 2019ರ ಮೇ ತಿಂಗಳಲ್ಲಿ ಕಿರ್ಗಿಜ್ ರಿಪಬ್ಲಿಕ್ನ ಬಿಷ್ಕೆಕ್ನಲ್ಲಿ ನಡೆದ ಸಭೆಗಳಲ್ಲಿ ಭಾರತ ಭಾಗವಹಿಸಿತ್ತು.