Job Description: ಇತ್ತೀಚಿಗೆ ಸಂಭವಿಸಿದ ಸ್ಟೋಟದಿಂದ ಸುದ್ದಿಯಲ್ಲಿರುವ ಲೆಬನಾನ್ ರಾಷ್ಟ್ರವು ತಾನು ನಿರ್ಮಿಸಲು ಹೊರಟಿರುವ ಬಿಸ್ರಿ ಅಣೆಕಟ್ಟು ಯೋಜನೆಗಾಗಿ ವಿಶ್ವ ಬ್ಯಾಂಕಿನಿಂದ ₹ 16 ಸಾವಿರ ಕೋಟಿ (224 ಮಿಲಿಯನ್ ಡಾಲರ್) ಸಾಲದ ಬೇಡಿಕೆ ಇಟ್ಟಿತ್ತು, ಆದರೆ ಪೂರ್ವಭಾವಿ ಷರತ್ತುಗಳನ್ನು ಪೂರೈಸಲು ವಿಫಲವಾದ ಕಾರಣ ವಿಶ್ವಬ್ಯಾಂಕ್ ಲೆಬನಾನ್ ಗೆ ಸಾಲ ನೀಡಲು ಹಿಂದೇಟು ಹಾಕಿದೆ. ಈ ಕುರಿತ ಪ್ರಕಟಣೆ ಹೊರಡಿಸಿರುವ ವಿಶ್ವಬ್ಯಾಂಕ್, ಲೆಬನಾನ್ ದೇಶವು ‘ನೀರು ಸರಬರಾಜು ಹೆಚ್ಚಿಸುವ (ಬಿಸ್ರಿ ಅಣೆಕಟ್ಟು) ಯೋಜನೆಗಾಗಿ ಕೇಳಿದ್ದ ಸಾಲವನ್ನು ರದ್ದುಪಡಿಸಲಾಗಿದ್ದು, ಅಣೆಕಟ್ಟು ನಿರ್ಮಾಣಕ್ಕೂ ಮೊದಲು ಷರತ್ತುಗಳನ್ನು ಪೂರೈಕೆಯಲ್ಲಿ ವಿಫಲವಾಗಿರುವುದರಿಂದ ಈ ನಿರ್ಧಾರ ಕೈಗೊಂಡಿರುವದಾಗಿ ತಿಳಿಸಿದೆ.