Job Description: ನವದೆಹಲಿ : ಕೇಂದ್ರ ಸರಕಾರವು ಇತ್ತೀಚಿಗೆ 2018-19ನೇ ಸಾಲಿನ ಉದ್ಯಮಸ್ನೇಹಿ ರಾಜ್ಯಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ವರದಿಯನ್ನು ಬಿಡುಗಡೆ ಗೊಳಿಸಿದರು.ಈ ಪಟ್ಟಿಯಲ್ಲಿ ಕರ್ನಾಟಕ 17ನೇ ಸ್ಥಾನ ಪಡೆದಿದೆ. ಕಳೆದ ಸಾಲಿನಲ್ಲಿ ರಾಜ್ಯವು 8ನೇ ಸ್ಥಾನವನ್ನು ಪಡೆದಿತ್ತು, ಆದರೆ ಈ ಬಾರಿ 9 ಸ್ಥಾನಗಳಷ್ಟು ಕುಸಿತ ಕಂಡು 17 ನೇ ಸ್ಥಾನಕ್ಕಿಳಿದಿದೆ. * 2019ರ ರ್ಯಾಂಕಿಂಗ್ ಪಟ್ಟಿಯಲ್ಲಿಟಾಪ್-10 ರಾಜ್ಯಗಳು 1. ಆಂಧ್ರಪ್ರದೇಶ, 2. ಉತ್ತರಪ್ರದೇಶ, 3. ತೆಲಂಗಾಣ, 4. ಮಧ್ಯಪ್ರದೇಶ, 5. ಜಾರ್ಖಂಡ್, 6. ಛತ್ತೀಸ್ಗಢ, 7. ಹಿ. ಪ್ರದೇಶ, 8. ರಾಜಸ್ಥಾನ, 9. ಪ. ಬಂಗಾಳ, 10. ಗುಜರಾತ್ * ಕಳೆದ 5 ವರ್ಷದಲ್ಲಿ ರಾಜ್ಯದ ಸ್ಥಾನ 2015: 09ನೇ ಸ್ಥಾನ, 2016: 13ನೇ ಸ್ಥಾನ, 2017: 08ನೇ ಸ್ಥಾನ, 2018: 08ನೇ ಸ್ಥಾನ, 2019: 17ನೇ ಸ್ಥಾನ