Job Description: ಭಾರತೀಯ ನೌಕಾಪಡೆಗೆ 55 ಸಾವಿರ ಕೋಟಿ ರೂಪಾಯಿ ಮೌಲ್ಯದ ಆರು ಸಬ್ ಮರೀನ್ ಖರೀದಿಸಲು ರಕ್ಷಣಾ ಸಚಿವಾಲಯ ಚಿಂತನೆ ನಡೆಸಿದೆ. ನೌಕಾಪಡೆ ಸಾಮರ್ಥ್ಯದಲ್ಲಿ ಚೀನಾ ರಾಷ್ಟ್ರಕ್ಕಿಂತ ಹಿಂದಿರುವ ಭಾರತ, ಸಾಮರ್ಥ್ಯವನ್ನು ಸರಿದೂಗಿಸಲು ಸಬ್ ಮರೀನ್ಗಳ ಖರೀದಿಗೆ ಮುಂದಾಗಿದೆ. ಈ ಎಲ್ಲ ಸಬ್ ಮರೀನ್ಗಳನ್ನು ಭಾರತದಲ್ಲಿಯೇ ತಯಾರಿಸಲು ನಿರ್ಧರಿಸಿದ್ದು, ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿಯೇ ಈ ಸಬ್ ಮರೀನ್ಗಳನ್ನು ತಯಾರಿಸಲು ಸಿದ್ಧವಾಗಿರುವ ರಕ್ಷಣಾ ಇಲಾಖೆ, ಇದಕ್ಕೆ P-751ಎಂದು ಹೆಸರಿಟ್ಟಿದೆ.