Job Description: ನವದೆಹಲಿ : ಭಾರತ ಸರ್ಕಾರವು ಕ್ರೀಡೆ ಹಾಗೂ ಕ್ರೀಡಾಳುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರೀಡಾಪಟುಗಳಿಗೆ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಾಗೂ ಸಾಹಸ ಪ್ರಶಸ್ತಿಗೆ ನೀಡಲಾಗುತ್ತಿದ್ದ ಪ್ರಶಸ್ತಿಗಳ ಮೊತ್ತವನ್ನು ಹೆಚ್ಚಿಸಿ ಅಧಿಕೃತವಾಗಿ ಆದೇಶಿಸಿದೆ. ರಾಜೀವ್ ಗಾಂಧಿಖೇಲ್ ಪ್ರಶಸ್ತಿ : 7.5 ಲಕ್ಷ ದಿಂದ 25 ಲಕ್ಷಕ್ಕೆ ಹೆಚ್ಚಳ ಅರ್ಜುನ ಪ್ರಶಸ್ತಿ : 5 ಲಕ್ಷದಿಂದ 15 ಲಕ್ಷಕ್ಕೆ ಏರಿಕೆ ದ್ರೋಣಚಾರ್ಯ ಪ್ರಶಸ್ತಿ : 5 ಲಕ್ಷದಿಂದ 10 ಲಕ್ಷ ಧ್ಯಾನ್ಚಂದ್ ಪ್ರಶಸ್ತಿ : 5 ಲಕ್ಷದಿಂದ 10 ಲಕ್ಷ * 2020 ನೇ ಸಾಲಿನಲ್ಲಿ 27 ಅಥ್ಲೆಟಿಕ್ಗಳನ್ನು ಅರ್ಜುನ ಪ್ರಶಸ್ತಿ, 13 ಮಂದಿ ತರಬೇತಿದಾರರಿಗೆ ದ್ರೋಣಚಾರ್ಯ ಪ್ರಶಸ್ತಿ ಮತ್ತು 15 ಜನರಿಗೆ ಧ್ಯಾನ್ಚಂದ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. * ಆಗಸ್ಟ್ 29 ರಂದು ಭಾರತದ ಹಾಕಿ ಮಾಂತ್ರಿಕ ಧ್ಯಾನ್ಚಂದ್ ಅವರ ಹುಟ್ಟುಹಬ್ಬದ ಪ್ರಯುಕ್ತ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಆಚರಣೆ ಮಾಡಲಾಗುತ್ತಿದ್ದು, ಆ ದಿನ ರಾಷ್ಟ್ರದ ರಾಷ್ಟ್ರಪತಿಯವರು ಈ ಪ್ರಶಸ್ತಿಗಳನ್ನು ಪ್ರಧಾನ ಮಾಡುವರು.