Job Description: ನವದೆಹಲಿ: ಇತ್ತೀಚಿಗೆ ನೀತಿ ಆಯೋಗ ಬಿಡುಗಡೆಗೊಳಿಸಿದ 'ರಫ್ತು ಸಿದ್ಧತೆ ಸೂಚ್ಯಂಕ 2020'ರ ವರದಿಯನುಸಾರ ಗುಜರಾತ್ ರಾಜ್ಯ ಮೊದಲ ಸ್ಥಾನ ಪಡೆದಿದೆ. ಎರಡು ಮತ್ತು ಮೂರನೆಯ ಸ್ಥಾನಗಳಲ್ಲಿ ಕ್ರಮವಾಗಿ ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳು ಸ್ಥಾನ ಪಡೆದಿವೆ. * ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರು ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ "ರಫ್ತು ಆತ್ಮನಿರ್ಭರ ಭಾರತ ಯೋಜನೆಯ ಅವಿಭಾಜ್ಯ ಅಂಗ. ವಿಶ್ವದ ವ್ಯಾಪಾರದಲ್ಲಿ ಭಾರತವು ತನ್ನ ಪಾಲನ್ನು ಹೆಚ್ಚಿಸಲು ಸದಾ ಯತ್ನಿಸುತ್ತಿರಬೇಕು" ಎಂದು ಹೇಳಿದರು. * ದೇಶದ ಒಟ್ಟು ರಫ್ತು ವಹಿವಾಟಿನಲ್ಲಿ ಶೇಕಡ 70ರಷ್ಟು ಪಾಲನ್ನು ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳು ಹೊಂದಿರುವದು ವಿಶೇಷ.