Job Description: ಕೊಲಂಬೋ : ಭಾರತದ ದಕ್ಷಿಣ ದಿಕ್ಕಿನಲ್ಲಿರುವ ದ್ವೀಪರಾಷ್ಟ್ರ ಶ್ರೀಲಂಕಾದ ವಿದೇಶಾಂಗ ಕಾರ್ಯದರ್ಶಿ ಜಯನಾಥ ಕೊಲಂಬೇಜ್ ಅವರು ತಮ್ಮ ರಾಷ್ಟ್ರವು ನೂತನ ವಿದೇಶ ನೀತಿ ಪ್ರಣಾಳಿಕೆಯಾಗಿ 'ಭಾರತ ಮೊದಲು' ನಿಲುವನ್ನು ತಳೆಯಲಿದೆ ಹಾಗೂ ಭಾರತದ ವ್ಯೂಹಾತ್ಮಕ ಭದ್ರತಾ ಹಿತಾಸಕ್ತಿಗಳನ್ನು ರಕ್ಷಿಸಲಿದೆ ಎಂದು ಹೇಳಿದ್ದಾರೆ. ಶ್ರೀಲಂಕಾವು ಚೀನಾ ಮತ್ತು ಭಾರತ ಈ ಎರಡು ಬಲಾಢ್ಯ ಆರ್ಥಿಕ ಶಕ್ತಿಗಳ ಮಧ್ಯದಲ್ಲಿದ್ದು, ಅದು ಯಾವುದೇ ರಾಷ್ಟ್ರದ, ವಿಶೇಷವಾಗಿ ಭಾರತದ ವಿರುದ್ಧ ಯಾವುದೇ ಕಾರ್ಯ ಮಾಡಲು ತನ್ನ ನೆಲವನ್ನು ಬಳಸಿಕೊಳ್ಳಲು ಯಾವುದೇ ರಾಷ್ಟ್ರಕ್ಕೂ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.