Job Description: ನವದೆಹಲಿ: ಪ್ರಸ್ತುತ ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆಯ(DRDO) ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವ ವಿಜ್ಞಾನಿ ಜಿ.ಸತೀಶ ರೆಡ್ಡಿ ಅವರ ಕಾರ್ಯಾವಧಿಯನ್ನು ಇನ್ನೂ ಎರಡು ವರ್ಷಗಳು ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. * 2018 ರ ಆಗಸ್ಟ್ ತಿಂಗಳಲ್ಲಿ ಸತೀಶ್ ರೆಡ್ಡಿ ಅವರು DRDO ಅಧ್ಯಕ್ಷರಾಗಿ ನೇಮಕಗೊಂಡಿದ್ದರು. * ದೇಸೀಯ ಕ್ಷಿಪಣಿಗಳ ವಿನ್ಯಾಸ, ಅಭಿವೃದ್ಧಿ ಹಾಗೂ ವೈಮಾನಿಕ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಸತೀಶ ರೆಡ್ಡಿ ಅವರ ಪಾತ್ರ ಪ್ರಮುಖವಾದುದು. * ಭಾರತೀಯ ಸೇನೆಯ ಭೂಸೇನೆ, ವಾಯುಸೇನೆ ಹಾಗೂ ನೌಕಾಪಡೆ ಗಳಿಗೆ ಅವಶ್ಯವಿರುವ ಶಸ್ತ್ರಾಸ್ತ್ರಗಳ ವೈಜ್ಞಾನಿಕ ಮಹತ್ವ, ಸಂಶೋಧನಾ ಸ್ವರೂಪ, ವಿನ್ಯಾಸ ಮತ್ತು ಅಭಿವೃದ್ಧಿ ಯೋಜನೆಗಳ ಕುರಿತು ಸಮಗ್ರ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ನೀಡುವ ಕೆಲಸವನ್ನು DRDO ಮುಖ್ಯಸ್ಥರು ಮಾಡುತ್ತಾರೆ.