Job Description: ರಾಜ್ಯದ ಪ್ರಮುಖ ಅಣೆಕಟ್ಟುಗಳಲ್ಲಿ ಒಂದಾಗಿರುವ ವಿಜಯಪುರ ಜಿಲ್ಲೆಯ ಆಲಮಟ್ಟಿ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರೋ ಲಾಲ್ ಬಹಾದ್ದೂರ್ ಶಾಸ್ತ್ರಿ ಅಣೆಕಟ್ಟು ಇದೀಗ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದೆ. ಕಾರಣ ಈ ಅಣೆಕಟ್ಟಿನ ನಾಮಫಲಕ, ಲಾಲ್ ಬಹಾದ್ದೂರ್ ಶಾಸ್ತ್ರೀ ಪ್ರಧಾನಿಯಾಗಿದ್ದ ವೇಳೆ 1964ರಲ್ಲಿ ಅಡಿಗಲ್ಲು ಹಾಕಿದ ಕಾರಣ ಈ ಅಣೆಕಟ್ಟಿಗೆ ಅವರ ಹೆಸರನ್ನೇ ಇಡಲಾಗಿದ್ದು, 2013ರಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಡ್ಯಾಂಗೆ ದೊಡ್ಡದಾಗಿ "ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ" ಅಂತಾ ಬೋರ್ಡ್ ಹಾಕಿಸಿದ್ದಾರೆ. ಈ ಬೋರ್ಡ್ 588 ಸ್ಕ್ವೇರ್ ಮೀಟರ್ನಷ್ಟಿದೆ. 3 ಡಿ ಮೆಟಾಲಿಕ್ ತಂತ್ರಜ್ಞಾನದಿಂದ ಬೋರ್ಡ್ ತಯಾರಿಸಲಾಗಿದ್ದು, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದೆ.