Job Description: ನವದೆಹಲಿ: ಕೇಂದ್ರ ಸರ್ಕಾರದ ಕ್ರೀಡಾ ಪ್ರಶಸ್ತಿಯಾದ ದ್ರೋಣಾಚಾರ್ಯ ಪ್ರಶಸ್ತಿಗೆ ಶೂಟಿಂಗ್ ಕೋಚ್ ಆಗಿರುವ ಜಸ್ಪಾಲ್ ರಾಣಾ ಅವರನ್ನು ಶಿಫಾರಸು ಮಾಡಲಾಗಿದೆ. ಕ್ರೀಡಾ ಸಚಿವಾಲಯದ ಆಯ್ಕೆ ಸಮಿತಿಯು ಹೆಸರಿಸಿರುವ ಒಟ್ಟು 13 ಜನ ತರಬೇತುದಾರರಲ್ಲಿ ರಾಣಾ ಕೂಡ ಸ್ಥಾನಪಡೆದಿದ್ದಾರೆ. * ಭಾರತ ರಾಷ್ಟ್ರೀಯ ರೈಫಲ್ ಸಂಸ್ಥೆ (NRAI) ರಾಣಾ ಅವರನ್ನು ಹೋದ ವರ್ಷ ಕೂಡ ಈ ಪ್ರಶಸ್ತಿಗೆ ಶಿಫಾರಸು ಮಾಡಿತ್ತು. * 43 ವರ್ಷದ ರಾಣಾ ಅವರು ಏಷ್ಯನ್ ಕ್ರೀಡಾಕೂಟದಲ್ಲಿ ಹಲವು ಪದಕಗಳನ್ನು ಗೆದ್ದುಕೊಂಡಿದ್ದಾರೆ. * ಮನು ಭಾಕರ್, ಸೌರಭ್ ಚೌಧರಿ ಹಾಗೂ ಅನೀಶ್ ಭನವಾಲಾ ಅವರಂತಹ ವಿಶ್ವದರ್ಜೆಯ ಯುವ ಶೂಟರ್ಗಳನ್ನು ಸಜ್ಜುಗೊಳಿಸಿದ್ದಾರೆ.