Job Description: ಭೋಪಾಲ್: ಮಧ್ಯಪ್ರದೇಶದ ಮುಖ್ಯಮಂತ್ರಿಗಳಾದ ಶಿವರಾಜ್ ಚೌಹಾಣ್ ಅವರು ಎಲ್ಲ ಸರ್ಕಾರಿ ಉದ್ಯೋಗಗಳು ಅಲ್ಲಿನ ಸ್ಥಳೀಯರಿಗೆ ಮಾತ್ರ ಮೀಸಲಿರುಸುವದಾಗಿ ಘೋಷಿಸಿದ್ದಾರೆ. ಸರ್ಕಾರಿ ಕೆಲಸ ನೀಡುವಾಗ ಮಧ್ಯಪ್ರದೇಶದವರಿಗೆ ಆದ್ಯತೆ ನೀಡಲಾಗುವುದು. ಹತ್ತು ಮತ್ತು ಹನ್ನೆರಡನೇ ತರಗತಿಯ ಅಂಕಗಳನ್ನು ಆಧರಿಸಿ ಸ್ಥಳೀಯ ಯುವಕರಿಗೆ ನೌಕರಿ ನೀಡುವ ಕ್ರಮ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಈ ಮೊದಲು ತಿಳಿಸಿದ್ದರು.