Job Description: ನವದೆಹಲಿ: ಚೀನಾದ vivo ಸಂಸ್ಥೆಯ IPL ಪ್ರಾಯೋಜಕತ್ವ ಕೊನೆಗೊಂಡ ಹಿನ್ನಲೆ, ಇಂಡಿಯನ್ ಪ್ರೀಮಿಯರ್ ಲೀಗ್ 2020 ನೇ ಆವೃತ್ತಿಗೆ ಆನ್ಲೈನ್ ಕ್ರೀಡಾ ವೇದಿಕೆಯಾಗಿರುವ ಡ್ರೀಮ್ ಇಲೆವನ್ ಸಂಸ್ಥೆಯು IPL ಟೂರ್ನಿಯ ಟೈಟಲ್ ಪ್ರಾಯೋಜಕತ್ವವನ್ನು 222 ಕೋಟಿ ಮೊತ್ತಕ್ಕೆ ತನ್ನದಾಗಿಸಿಕೊಂಡಿದೆ. ಇತ್ತೀಚಿಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಡ್ರೀಮ್ ಇಲೆವನ್ ಸಂಸ್ಥೆಯು ₹222 ಕೋಟಿ ಮೊತ್ತಕ್ಕೆ ಪ್ರಾಯೋಜಕತ್ವವನ್ನು ಪಡೆದುಕೊಂಡಿತು ಎಂದು IPL ಆಡಳಿತ ಸಮಿತಿಯ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಮಾಹಿತಿ ನೀಡಿದ್ದಾರೆ.