Job Description: ದೆಹಲಿ : ಗಡಿ ಭದ್ರತಾ ಪಡೆ (BSF) ಯಾ ಮಹಾನಿರ್ದೇಶಕರಾಗಿ (DG) ಸಿಬಿಐ ಮಾಜಿ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ರಾಕೇಶ್ ಅಸ್ತಾನ ಅವರು 1984ರ ಬ್ಯಾಚ್ ನ ಗುಜರಾತ್ ಕೇಡರ್ ನಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಇವರು ಗೋಧ್ರಾದಲ್ಲಿ ನಡೆದ ಸಬರಮತಿ ಎಕ್ಸ್ಪ್ರೆಸ್ ಬೆಂಕಿ ಘಟನೆ, 1997ರ ಮೇವು ಹಗರಣ ಸೇರಿ ಪ್ರಮುಖ ಘಟನೆಗಳಲ್ಲಿ ತನಿಖೆ ನಡೆಸಿದ್ದಾರೆ.