Job Description: ಪ್ರತಿ ವರ್ಷ ಅಂತರರಾಷ್ಟ್ರೀಯ ಯುವ ದಿನವನ್ನು ಆಗಸ್ಟ್ 12 ರಂದು ವಿಶ್ವಸಂಸ್ಥೆ ಹಾಗೂ ಇತರ ಸಂಸ್ಥೆಗಳು ಆಚರಿಸುತ್ತವೆ. ಮೊದಲ ಅಂತರರಾಷ್ಟ್ರೀಯ ಯುವ ದಿನವನ್ನು 1999 ರಲ್ಲಿ ಆಚರಿಸಲಾಯಿತು. ಈ ವರ್ಷದ ಘೋಷವಾಕ್ಯ : ಜಾಗತಿಕ ಕಾರ್ಯಕ್ಕಾಗಿ ಯುವಜನರ ಬದ್ಧತೆ (Youth Engagement for Global Action) * ಭಾರತದಲ್ಲಿ 2011 ರ ಜನಗಣತಿ ಅನುಸಾರ 15 ರಿಂದ 24 ವರ್ಷದೊಳಗಿನ ವ್ಯಕ್ತಿಗಳನ್ನು ಯುವಕರೆಂದು ಗುರುತಿಸಲಾಗುತ್ತಿದ್ದು, ಭಾರತದಲ್ಲಿ ಯುವಕರು ಒಟ್ಟು ಜನಸಂಖ್ಯೆಯ ಐದನೇ ಒಂದು ಭಾಗದಷ್ಟು ಕೊಡುಗೆ ನೀಡುತ್ತಾರೆ. * ಭಾರತವು 2014 ರಲ್ಲಿ ರಾಷ್ಟ್ರೀಯ ಯುವ ನೀತಿಯನ್ನು ಆರಂಭಿಸಿದ್ದು, ರಾಷ್ಟ್ರೀಯ ಯುವ ನೀತಿಯ ಪ್ರಕಾರ 15 ರಿಂದ 29 ವರ್ಷದೊಳಗಿನ ವ್ಯಕ್ತಿಗಳನ್ನು ಯುವಕರಾಗಿ ಪರಿಗಣಿಸಲಾಗುತ್ತಿದೆ.