Job Description: ಟೆಲ್ ಅವೀವ್ : ಇತ್ತೀಚಿಗೆ ಇಸ್ರೇಲ್ ನಿಂದ ಆಯರೋ 2 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಿರುವದಾಗಿ ಇಸ್ರೇಲ್ ರಕ್ಷಣಾ ಸಚಿವಾಲಯ ತಿಳಿಸಿದೆ. * ಈ ಆಯರೋ 2 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು 3,000 ಕಿಲೋಮೀಟರ್ (1,800 ಮೈಲುಗಳಿಗಿಂತ ಹೆಚ್ಚು) ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಡೆಯಲು ಬಳಸಬಹುದಾಗಿದೆ. ವಿವಿಧ ಸಂದರ್ಭಗಳಲ್ಲಿ ತಮ್ಮ ಯುದ್ಧ ಸಿದ್ಧತೆ ಮತ್ತು ದಕ್ಷತೆಯನ್ನು ಉತ್ತಮಪಡಿಸಿಕೊಳ್ಳಲು ಇಸ್ರೇಲ್ ಕ್ಷಿಪಣಿ ರಕ್ಷಣೆಯ ವಿವಿಧ ಹಂತಗಳನ್ನು ಈ ಕಾರ್ಯಾಚರಣೆ ಒಳಗೊಂಡಿವೆ.