Job Description: ಆಗಸ್ಟ್ 12, 2012 ರಂದು, ಏಷ್ಯಾ ಮತ್ತು ಆಫ್ರಿಕನ್ ಆನೆಗಳ ತುರ್ತು ಅವಸ್ಥೆಯ ಬಗ್ಗೆ ಗಮನ ಸೆಳೆಯಲು ಹಾಗೂ ಅವುಗಳ ಸಂರಕ್ಷಣೆ ಕುರಿತು ಜಾಗೃತಿಗಾಗಿ ವಿಶ್ವ ಆನೆ ದಿನವನ್ನು ಪ್ರಾರಂಭಿಸಲಾಯಿತು. ಪ್ರಸ್ತುತ 65 ಕ್ಕೂ ಹೆಚ್ಚು ವನ್ಯಜೀವಿ ಸಂಸ್ಥೆಗಳು ಮತ್ತು ವಿಶ್ವದಾದ್ಯಂತದ ಅನೇಕ ವ್ಯಕ್ತಿಗಳು ಈ ದಿನವನ್ನು ಬೆಂಬಲಿಸುತ್ತಿದ್ದಾರೆ * ಆನೆಯು ವಿಶ್ವದಾದ್ಯಂತ ಜನರ ಸಂಸ್ಕೃತಿಯಾ ಭಾಗವಾಗಿದೆ ಹಾಗಾಗಿ ಈ ಜೀವಿಯನ್ನು ಪ್ರೀತಿಸುತ್ತಾರೆ ಹಾಗೂ ಗೌರವಿಸುತ್ತಾರೆ. * ಭಾರತದ ಒಟ್ಟು ಆನೆಗಳ ಪೈಕಿ ಶೇ 25ರಷ್ಟು ಆನೆಗಳು ಕರ್ನಾಟಕದಲ್ಲಿ ಇವೆ. * 2012ರ ಆನೆ ಗಣತಿಯ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ 27 ಸಾವಿರ ಆನೆಗಳಿದ್ದರೆ, ರಾಜ್ಯದಲ್ಲಿ ಅವುಗಳ ಸಂಖ್ಯೆ 6,049. * ‘ದೇಶದಲ್ಲಿರುವ 50 ಹುಲಿ ಸಂರಕ್ಷಿತ ಪ್ರದೇಶಗಳ ಪೈಕಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಆನೆ ಸಾಂದ್ರತೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ.