Job Description: ಬೈರುತ್: ಇತ್ತೀಚಿಗೆ ಲೆಬನಾನ್ ರಾಜಧಾನಿಯಲ್ಲಿ ಬೈರುತ್ ನಲ್ಲಿ ಸಂಭವಿಸಿದ ಭೀಕರ ಅಮೋನಿಯಂ ನೈಟ್ರೇಟ್ ಸ್ಫೋಟದ ಕಾರಣ ಈವರೆಗೆ ಸುಮಾರು 160 ಜನರು ಮೃತಪಟ್ಟಿದ್ದರೆ, 6000 ಜನರು ಗಾಯಗೊಂಡಿದ್ದಾರೆ. ಹಾಗು ಅಂದಾಜು ಮೂರು ಲಕ್ಷ ಮನೆಗಳಿಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಈ ಭೀಕರ ಸ್ಟೋಟಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣವಾಗಿದ್ದು, ಸರ್ಕಾರವೇ ನೇರ ಹೊಣೆ ಎಂದು ಸಾರ್ವಜನಿಕರು ಪ್ರತಿಭಟನೆಗಿಳಿದ ಕಾರಣ ಬಹುತೇಕ ಸಚಿವರುಗಳು ತಮ್ಮ ರಾಜಿನಾಮೆಯನ್ನು ರಾಷ್ಟ್ರಾಧ್ಯಕ್ಷರಿಗೆ ಸಲ್ಲಿಸಿದ್ದಾರೆ. ಹಾಗಾಗಿ ಇಲ್ಲಿನ ಸರ್ಕಾರ ಪತನಗೊಂಡಿದೆ.