Job Description: ಮೇಕ್ ಇನ್ ಇಂಡಿಯಾ ಅಭಿಯಾನದ ಭಾಗವಾಗಿ ರಕ್ಷಣಾ ಉಪಕರಣಗಳನ್ನು ಸ್ವದೇಶದಲ್ಲಿಯೇ ತಯಾರಿಸಲು ಉತ್ತೇಜನ ನೀಡುವ ಉದ್ದೇಶದಿಂದ ರಕ್ಷಣಾ ವಲಯದ ಸುಮಾರು 101 ಸಾಮಾಗ್ರಿಗಳನ್ನು ಆಮದುಮಾಡಿಕೊಳ್ಳುವದನ್ನು ನಿರ್ಬಂಧಿಸಿ ಕೇಂದ್ರ ಸರಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಷಯನ್ನು ತಿಳಿಸಿದ್ದು, ಭಾರತವನ್ನು ಸ್ವಾವಲಂಬಿಯಾಗಿಸುವ ಉದ್ದೇಶದಿಂದ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದ 101 ರಕ್ಷಣಾ ಉಪಕರಣಗಳನ್ನು ನಿರ್ಬಂದಿಸಿರುವದಾಗಿ ಅವರು ತಿಳಿಸಿದ್ದಾರೆ. * ಇಲ್ಲಿಯವರೆಗೆ 265 ರಕ್ಷಣಾ ಸಾಮಾಗ್ರಿ ಖರೀದಿ ಸಲುವಾಗಿ 3.5 ಲಕ್ಷ ಕೋಟಿ ರೂ. ವಿನಿಯೋಗಿಸಲಾಗುತ್ತಿತ್ತು. ಇದೀಗ ಸ್ವದೇಶೀ ನಿರ್ಮಾಣಕ್ಕಾಗಿ ರಕ್ಷಣಾ ಸಾಮಾಗ್ರಿ ಉತ್ಪಾದನೆಗೆ 1.30 ಲಕ್ಷ ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ಮೀಸಲಿರಿಸಲಿದೆ.