Job Description: ಭಾರತದ ಹಿರಿಯ ಕುಸ್ತಿಪಟು ಭಜರಂಗ್ ಪೂನಿಯಾ ಹಾಗೂ ರವಿಕುಮಾರ್ ದಹಿಯಾ ಅವರು ಇಲ್ಲಿ ನಡೆಯುತ್ತಿರುವ ರೋಮ್ ಶ್ರೇಯಾಂಕದ ಸರಣಿಯಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಫೈನಲ್ ಹಣಾಹಣಿಯಲ್ಲಿ ಭಜರಂಗ್ ಪೂನಿಯಾ ಅವರು ಅಮೆರಿಕದ ಜೋರ್ಡನ್ ಒಲಿವರ್ ವಿರುದ್ಧ 4-3 ಅಂತರದಲ್ಲಿ ಗೆದ್ದು ಸ್ವರ್ಣ ಪದಕ ತನ್ನದಾಗಿಸಿಕೊಂಡರು. 61 ಕೆ.ಜಿ ಮತ್ತೊಂದು ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ರವಿಕುಮಾರ್ ದಹಿಯಾ ಅವರು 6-0 ಅಂತರದಲ್ಲಿ ಕಜಕಸ್ತಾನದ ನುರ್ಬೋಲತ್ ಅಬ್ದುಲಿಯೆವ್ ವಿರುದ್ಧ ಗೆದ್ದು ಬಂಗಾರ ಗೆದ್ದರು. ಭಜರಂಗ್ ಹಾಗೂ ರವಿಕುಮಾರ್ ದಹಿಯಾ ಅವರು ದೇಶಕ್ಕೆ ಪದಕ ಗೆದ್ದ ವಿನೇಶ್ ಪೊಗಟ್, ಅಶು ಮಲಿಕ್ ಹಾಗೂ ಸಜನ್ ಭನ್ವಾಲ್, ಗುರುಪ್ರೀತ್ ಸಿಂಗ್ ಹಾಗೂ ಸುನೀಲ್ ಕುಮಾರ್ ಅವರ ಪಟ್ಟಿಗೆ ಸೇರ್ಪಡೆಯಾದರು.