Job Description: 2019-20ರ ವರ್ಷದಲ್ಲಿ ಬುಡಕಟ್ಟು ಪ್ರಾದೇಶಿಕ ಇಲಾಖೆಯಿಂದ (ಟಿಎಡಿ) ಬುಡಕಟ್ಟು ಸಮುದಾಯದ 6,000 ಹೆಣ್ಣುಮಕ್ಕಳಿಗೆ ಸ್ಕೂಟರ್ ವಿತರಿಸುವುದಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರಕಟಿಸಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಮೊದಲು 4000 ಸ್ಕೂಟರ್ ವಿತರಿಸುವುದಾಗಿ ಸರ್ಕಾರ ತಿಳಿಸಿತ್ತು. ಅದೀಗ 6 ಸಾವಿರಕ್ಕೆ ಏರಿಸಿ ಅನುಮೋದನೆ ನೀಡಿದೆ.