Job Description: 2009 ರಲ್ಲಿ ಮೈಕ್ರೋಸಾಫ್ಟ್ ಕಂಪನಿ ವಿಂಡೋಸ್ 7 ಬಿಡುಗಡೆಗೊಳಿಸಿತ್ತು. ಇಂತಹ ವಿಂಡೋಸ್ 7, ಕಂಪ್ಯೂಟರ್ ಬಳಕೆದಾರರ ಮೆಚ್ಚಿನ ಓಎಸ್ ಕೂಡ ಆಗಿತ್ತು. ಆದ್ರೇ ಇಂತಹ ವಿಂಡೋಸ್ 7 ಓಎಸ್ ಅನ್ನು ಇದೀಗ ಮೈಕ್ರೋಸಾಫ್ಟ್ ಕಂಪನಿ ಅಧಿಕೃತವಾಗಿ ವಿಂಡೋಸ್ 7ಗೆ ನೀಡಿದ್ದ ಬೆಂಬಲವನ್ನು ಸ್ಥಗಿತಗೊಳಿಸಲಿದೆ. ಭಾರತದ ಶೇ.41ರಷ್ಟು ಜನರು ಬಳಸುತ್ತಿರುವ ಬಹು ಬೇಡಿಕೆಯ ವಿಂಡೋಸ್ 7. ಆದ್ರೇ ಇಂತಹ ವಿಂಡೋಸ್ 7ಗೆ ಇದೀಗ ಸೈಬರ್ ಸೆಕ್ಯೂರಿಟಿ ಸಮಸ್ಯೆ ಎದುರಾಗಿದೆ. ಇದೇ ಕಾರಣದಿಂದಾಗಿ ಕಂಪ್ಯೂಟರ್ ಬಳಕೆದಾರರ ಹಿತದೃಷ್ಠಿಯಿಂದ ವಿಂಡೋಸ್ 7 ಅಪರೇಟಿಂಗ್ ಸಿಸ್ಟಮ್ ಮೇಲಿನ ತನ್ನ ಸಂಪೂರ್ಣ ಸಪೋರ್ಟ್ ಅನ್ನು ಮೈಕ್ರೋಸಾಫ್ಟ್ ಸ್ಧಗಿತಗೊಳಿಸಿದೆ. ಈ ಹಿನ್ನಲಯಲ್ಲಿ ವಿಂಡೋಸ್ 7 ಆಪರೇಟಿಂಗ್ ಸಿಸ್ಟಮ್ ಬಳಕೆದಾರರು ಉಚಿತವಾಗಿ ವಿಂಡೋಸ್ 10ಗೆ ಬದಲಾಯಿಸಿಕೊಳ್ಳಬಹುದಾಗಿದೆ. ಆದರೆ ವೈರಸ್ ಸಮಸ್ಯೆಯಾದರೆ, ಇತರ ತಾಂತ್ರಿಕ ದೋಷವಿದ್ದರೆ ಮತ್ತು ಪರಿಷ್ಕೃತ ಆವೃತ್ತಿಯ ಸಾಫ್ಟ್ ವೇರ್ ಗಳನ್ನು ಸೇವೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ ಮತ್ತು ಮೈಕ್ರೋಸಾಫ್ಟ್ ಸಪೋರ್ಟ ಕೂಡ ದೊರೆಯುವುದಿಲ್ಲ.