Job Description: ವಿಶ್ವದ ಕುಬ್ಜ ವ್ಯಕ್ತಿ, ಗಿನ್ನೆಸ್ ವಿಶ್ವ ದಾಖಲೆಗೆ ಪಾತ್ರವಾಗಿದ್ದ ಖಗೇಂದ್ರ ಥಾಪ ಮಗರ್ ನೇಪಾಳದ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿರುವುದಾಗಿ ಅವರ ಕುಟುಂಬ ಮೂಲಗಳು ತಿಳಿಸಿವೆ. 67.08 ಸೆಂಟಿಮೀಟರ್(2 ಅಡಿ,2.41 ಇಂಚು)ಎತ್ತರದ ಖಗೇಂದ್ರ ಕಠ್ಮಂಡುವಿನ ಪೊಖಾರದಲ್ಲಿರುವ ಆಸ್ಪತ್ರೆಯಲ್ಲಿ ನ್ಯುಮೋನಿಯಾದಿಂದ ಮೃತಪಟ್ಟಿದ್ದಾರೆ. 1992ರ ಅಕ್ಟೋಬರ್ 14ರಂದು ನೇಪಾಳದಲ್ಲಿ ಜನಿಸಿದ್ದ ಖಗೇಂದ್ರ ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದರು. ಖಗೇಂದ್ರ ನಿಧನಕ್ಕೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮುಖ್ಯ ಸಂಪಾದಕ ಕ್ರೆಗ್ ಗ್ಲೆನ್‌ಡೆ ಶೋಕ ವ್ಯಕ್ತಪಡಿಸಿದ್ದಾರೆ. "ನ್ಯುಮೋನಿಯಾದಿಂದಾಗಿ ಅವರು ಆಸ್ಪತ್ರೆ ಹೋಗಿ, ಬರುತ್ತಿದ್ದರು. ಈ ಬಾರಿ ಅವರಿಗೆ ಹೃದಯಕ್ಕೆ ನ್ಯುಮೋನಿಯಾ ಬಾಧಿಸಿದ್ದು, ಅವರು ಇಂದು ಮೃತಪಟ್ಟಿದ್ದಾರೆ'' ಎಂದು ಖಗೇಂದ್ರ ಅವರ ಸಹೋದರ ಮಹೇಶ್ ತಿಳಿಸಿದ್ದಾರೆ.