Job Description: ರಾಜ್ ಕೋಟ್ ನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 36 ರನ್ ಗಳಿಂದ ಬಗ್ಗುಬಡಿದ ಟೀಮ್ ಇಂಡಿಯಾ ಸರಣಿಯನ್ನು 1 -1 ರಲ್ಲಿ ಜೀವಂತವಾಗಿರಿಸಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮ ಉತ್ತಮ ಪ್ರದರ್ಶನ ನೀಡಿದ್ದು ಆರಂಭಿಕ ಬ್ಯಾಟ್ಸ್ ಮನ್ ಆಗಿ ಅತಿವೇಗದಲ್ಲಿ 7000 ರನ್ ಪೇರಿಸಿದ ದಾಖಲೆ ಬರೆದಿದ್ದಾರೆ. 137 ಇನಿಂಗ್ಸ್ ಗಳಲ್ಲಿ ರೋಹಿತ್ ಶರ್ಮ 7000 ರನ್ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ಹಶೀಮ್ ಅಮ್ಲ 147 ಇನ್ನಿಂಗ್ಸ್ ಗಳಲ್ಲಿ, ಸಚಿನ್ ತೆಂಡೂಲ್ಕರ್ 160 ಇನಿಂಗ್ಸ್, ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ 165, ಸೌರವ್ ಗಂಗೂಲಿ 168 ಇನ್ನಿಂಗ್ಸ್ ಗಳಲ್ಲಿ 7 ಸಾವಿರ ರನ್ ಗಳಿಸಿದ್ದಾರೆ.