Job Description: ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳುವ ಭಾರತ ಮಹಿಳಾ ಹಾಕಿ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ. ರಾಣಿ ರಾಂಪಾಲ್ ತಂಡವನ್ನು ಮುನ್ನಡೆಸಲಿದ್ದಾರೆ. ಜನವರಿ 25ರಂದು ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ ಸರಣಿ ಆರಂಭವಾಗಲಿದೆ. ಸವಿತಾ ಉಪನಾಯಕಿಯ ಜವಾಬ್ದಾರಿ ನಿಭಾಯಿಸಲಿದ್ದಾರೆ. ನ್ಯೂಜಿಲೆಂಡ್‌ನ ಡೆವಲಪ್‌ಮೆಂಟ್ ತಂಡದ ಎದುರು ಮೊದಲ ಪಂದ್ಯ ಆಡಲಿರುವ ರಾಣಿ ಪಡೆಯು, ಜನವರಿ 27 ಹಾಗೂ 29ರಂದು ಕಿವೀಸ್ ಮಹಿಳಾ ತಂಡದ ವಿರುದ್ಧ ಕಣಕ್ಕಿಳಿಯಲಿದೆ. ಫೆಬ್ರುವರಿ 4ರಂದು ಇಂಗ್ಲೆಂಡ್ ಎದುರು ಹಾಗೂ 5ರಂದು ಆತಿಥೇಯ ತಂಡದ ವಿರುದ್ಧ ಭಾರತ ಆಡಲಿದೆ. ತಂಡ ಇಂತಿದೆ: ರಾಣಿ ರಾಂಪಾಲ್ (ನಾಯಕಿ), ಸವಿತಾ (ಉಪನಾಯಕಿ), ರಜಿನಿ ಎತಿಮರ್ಪು, ದೀಪ್ ಗ್ರೇಸ್ ಎಕ್ಕಾ, ಗುರ್ಜಿತ್ ಕೌರ್, ರೀನಾ ಖೋಕರ್, ಸಲೀಮಾ ಟೇಟ್, ಸುಶೀಲಾ ಚಾನು, ನಿಶಾ, ನಮಿತಾ ಟೊಪ್ಪೊ, ಉದಿತಾ, ಮೋನಿಕಾ, ಲಿಲಿಮಾ ಮಿಂಜ್, ನೇಹಾ, ಸೋನಿಕಾ, ಶರ್ಮಿಳಾ ದೇವಿ, ನವನೀತ್ ಕೌರ್, ಲಾಲ್‌ರೆಮ್ಸಿಯಾಮಿ, ವಂದನಾ ಕಟಾರಿಯಾ, ನವಜೋತ್ ಕೌರ್.