Job Description: ಹೊಸದಿಲ್ಲಿ: ಒಮಾನ್ ನ ದೊರೆ ಸುಲ್ತಾನ್ ಖಬೂಸ್ ಬಿನ್ ಸೈದ್ ಅಲ್ ಸೈದ್ ಅವರ ನಿಧನದ ಹಿನ್ನೆಲೆಯಲ್ಲಿ ಭಾರತ ಸರಕಾರ ಸೋಮವಾರ ಒಂದು ದಿನದ ಶೋಕಾಚರಣೆ ಘೋಷಿಸಿದೆ. ಒಮಾನ್ ನ ದೊರೆ ಜನವರಿ 10ರಂದು ತಮ್ಮ 79ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದರು. "ಅವರಿಗೆ ಗೌರವಾರ್ಥವಾಗಿ ಜನವರಿ 13ರಂದು ದೇಶಾದ್ಯಂತ ಒಂದು ದಿನದ ಶೋಕಾಚರಣೆ ನಡೆಯುವುದು. ಭಾರತದಾದ್ಯಂತ ರಾಷ್ಟ್ರಧ್ವಜ ಅರ್ಧಮಟ್ಟಕ್ಕೆ ಇಳಿಸಲಾಗುವುದು ಹಾಗೂ ಆ ದಿನ ಯಾವುದೇ ಅಧಿಕೃತ ಮನರಂಜನಾ ಕಾರ್ಯಕ್ರಮಗಳು ನಡೆಯುವುದಿಲ್ಲ'' ಎಂದು ಗೃಹ ಸಚಿವಾಲಯದ ಹೇಳಿಕೆ ತಿಳಿಸಿದೆ.