Job Description: ಹೊಸದಿಲ್ಲಿ: ಪ್ರಸಕ್ತ ವರ್ಷದ ಮೊದಲ ಚಂದ್ರ ಗ್ರಹಣ ಜ.10ರಂದು ನಡೆಯಲಿದೆ. ಭಾರತದಲ್ಲಿ ಆ ದಿನ ರಾತ್ರಿ 10:37 ರಿಂದ ಜ. 11ರ ಬೆಳಗ್ಗೆ 2.42 ನಿಮಿಷ ಗಳ ಕಾಲ ಗೋಚರಿಸಲಿದೆ. ಅಂದರೆ ಒಟ್ಟು 4 ಗಂಟೆ 5 ನಿಮಿಷಗಳ ಕಾಲ ದೇಶದಲ್ಲಿ ಗ್ರಹಣ ಕಾಣಿಸಿ ಕೊಳ್ಳಲಿದೆ. ಅರೆ ನೆರಳಿನ ಈ ಚಂದ್ರಗ್ರಹಣವನ್ನು ಐರೋಪ್ಯ ಒಕ್ಕೂಟ, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಉತ್ತರ ಅಮೆರಿಕದ ಹೆಚ್ಚಿನ ಭಾಗಗಳು, ದಕ್ಷಿಣ ಅಮೆರಿಕದ ಪೂರ್ವ ಭಾಗಗಳು, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ, ಆರ್ಕ್‌ಟಿಕ್ ಪ್ರದೇಶಗಳಲ್ಲಿ ವೀಕ್ಷಿಸಲು ಸಾಧ್ಯವಾಗಲಿದೆ.