Job Description: ನವದೆಹಲಿ, ಜ.7-ಕೋಲಾರ, ಬಂಗಾರಪೇಟೆ ಮತ್ತು ಮಾಲೂರು ನಗರ ಪಟ್ಟಣಗಳಿಗೆ ನೀರು ಪೂರೈಸುವ ಮಾರ್ಕಂಡೇಯ ಅಣೆಕಟ್ಟಿಗೆ ಕ್ಯಾತೆ ತೆಗೆದಿರುವ ತಮಿಳುನಾಡು ವಿರುದ್ಧ ರಾಜ್ಯ ಸರ್ಕಾರ ಇಂದು ಅಫಿಡೆವಿಟ್ ಸಲ್ಲಿಸಿದೆ. ಮಾರ್ಕಂಡೇಯ ಡ್ಯಾಂ ನಿರ್ಮಾಣ ತಡೆ ಕೋರಿ ತಮಿಳುನಾಡು ಸಲ್ಲಿಸಿರುವ ಆಕ್ಷೇಪಣಾ ಅರ್ಜಿಯನ್ನು ತಿರಸ್ಕರಿಸಬೇಕು ಮತ್ತು ಅಣೆಕಟ್ಟು ಕಾಮಗಾರಿ ಮುಂದುವರೆಸಲು ಅನುವು ಮಾಡಿಕೊಡಬೇಕು ಎಂದು ರಾಜ್ಯ ಸರ್ಕಾರ ಸರ್ವೋನ್ನತ ನ್ಯಾಯಾಲಯದಲ್ಲಿ ಮನವಿ ಮಾಡಿದೆ.