Job Description: * ಮೇಘಾಲಯ ಮತ್ತು ಮಿಜೋರಾಂ ನ ಮಾಜಿ ರಾಜ್ಯಪಾಲ ಹಾಗೂ ಬಿಜೆಪಿಯ ಹಿರಿಯ ನಾಯಕ ಕೇಸರಿನಾಥ್ ತ್ರಿಪಾಠಿ ಅವರು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ನರಳುತ್ತಿದ್ದ 88 ವರ್ಷದ ತ್ರಿಪಾಠಿ ಅವರು ಚಿಕಿತ್ಸೆ ಫಲಕಾರಿಯಾಗದೆ ಜನೆವರಿ 09 ರಂದು ಮೃತಪಟ್ಟಿದ್ದಾರೆ.* ನವೆಂಬರ್ 10, 1934 ರಂದು ಅಲಹಾಬಾದ್‍ನಲ್ಲಿ ಜನಿಸಿದ ತ್ರಿಪಾಠಿ ಅವರು ಜುಲೈ 2014 ರಿಂದ ಜುಲೈ 2019 ರವರೆಗೆ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು. ಅದಕ್ಕೂ ಮೊದಲು, ಅವರು ಬಿಹಾರ, ಮೇಘಾಲಯ ಮತ್ತು ಮಿಜೋರಾಂ ರಾಜ್ಯಪಾಲರಾಗಿದ್ದರು.* ಆರು ಬಾರಿ ಯುಪಿ ವಿಧಾನಸಭೆಯ ಸದಸ್ಯರಾಗಿದ್ದರು ಮತ್ತು 1977 ರಿಂದ 1979 ರವರೆಗೆ ಜನತಾ ಪಕ್ಷದ ಆಡಳಿತದಲ್ಲಿ ರಾಜ್ಯದಲ್ಲಿ ಸಾಂಸ್ಥಿಕ ಹಣಕಾಸು ಮತ್ತು ಮಾರಾಟ ತೆರಿಗೆಯ ಕ್ಯಾಬಿನೆಟ್ ಸಚಿವರಾಗಿದ್ದರು.